UK Suddi
The news is by your side.

ನಿಮ್ಮ 1 ತಪ್ಪು ಮತ ಮಕ್ಕಳನ್ನು ಪಕೋಡ ಮಾರುವಂತೆ ಮಾಡಬಹುದು: ನವಜೋತ್ ಸಿಂಗ್ ಟ್ವೀಟ್.

ನವದೆಹಲಿ: ನಿಮ್ಮ ತಪ್ಪಾದ ಒಂದು ಮತ ನಿಮ್ಮ ಮಗುವನ್ನು ಪಕೋಡ ಮಾರುವಂತೆ, ಚಹಾ ಮಾರುವಂತೆ, ವಾಚ್ಮನ್ ಆಗುವಂತೆ ಮಾಡಬಹುದು ಅಂತ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಧು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಸಿಧು ನಿಮ್ಮ ಒಂದೇ ಒಂದು ಮತದಿಂದ ಮಕ್ಕಳ ಭವಿಷ್ಯ ಬದಲಾಗಬಹುದು ಒಂದು ಮತ ನಿಮ್ಮ ಮಕ್ಕಳನ್ನ ಚಾಯ್‌ವಾಲ್ ಮಾಡುತ್ತೆ, ತಪ್ಪು ನಿರ್ಧಾರ ನಿಮ್ಮ ಮಕ್ಕಳನ್ನ ಪಕೋಡಾ ಮಾರುವಂತೆ ಮಾಡುತ್ತೆ.

ಒಂದು ತಪ್ಪು ನಡೆ ನಿಮ್ಮ ಮಕ್ಕಳನ್ನು ಚೌಕಿದಾರ್‌ ಆಗುವಂತೆ ಮಾಡುತ್ತದೆ. ದೇಶದಲ್ಲಿ ಬಿಜೆಪಿಗೆ ಮತ ನೀಡಿ ತಪ್ಪು ಮಾಡಬೇಡಿ. ತಪ್ಪು ಆಗುವ ಮೊದಲೇ ಎಚ್ಚೆತ್ತುಕೊಳ್ಳಿ ಎಂದಿರುವ ಸಿಧು ನರೇಂದ್ರ ಮೋದಿ ಅವರಿಗೆ ಮತ ನೀಡದಂತೆ ಮನವಿ ಮಾಡಿದ್ದಾರೆ.

Comments