UK Suddi
The news is by your side.

ಬಡ ನೇಕಾರನ ಮಗನಿಗೆ ಬಂತು 620 ಮಾರ್ಕ್ಸ್-ರಾಜ್ಯಕ್ಕೆ 6ನೇ ಸ್ಥಾನ.

ಬನಹಟ್ಟಿ(ಬಾಗಲಕೋಟ):ಇಲ್ಲಿನ ಎಸ್ ಆರ್ ಎ ಹೈಸ್ಕೂಲ್ ವಿದ್ಯಾರ್ಥಿ ಹಾಗೂ ನೇಕಾರ ಕುಟುಂಬದ ರವಿಕುಮಾರ ಬಸವರಾಜ ಕರಲಟ್ಟಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 620 ಅಂಕಗಳಿಸುವುದರ ಮೂಲಕ ರಾಜ್ಯಕ್ಕೆ 6 ನೇ ಸ್ಥಾನ ಪಡೆಯುವ ಮೂಲಕ ವಿದ್ಯೆ ಯಾರಪ್ಪನ ಸ್ವತ್ತು ಅಲ್ಲ ಎಂಬುದನ್ನು ಒಬ್ಬ ಬಡ ನೇಕಾರನ ಮಗ ಸಾಧಿಸಿ ತೋರಿಸಿದ್ದಾನೆ.

ಬನಹಟ್ಟಿಯ ಬಸವರಾಜ ಕರಲಟ್ಟಿ ಅವರು ಬಡ ನೇಕಾರ ಸಮುದಾಯದವರಾಗಿದ್ದು,ಅವರ ಮಗನಾದ ರವಿಕುಮಾರ್ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಈ ಸಾಧನೆಗೈದಿದ್ದಾನೆ.

ರವಿಕುಮಾರ್ ಕರಲಟ್ಟಿ ಕನ್ನಡಕ್ಕೆ 125,ಇಂಗ್ಲಿಷ್ 99,ಹಿಂದಿ 99,ಗಣಿತ 98,ವಿಜ್ಞಾನ 99,ಸಮಾಜ ವಿಜ್ಞಾನಕ್ಕೆ 100 ಅಂಕಗಳನ್ನು ಪಡೆದು 99.02ರಷ್ಟು ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಆರನೇ ಸ್ಥಾನ ಪಡೆದಿದ್ದಾರೆ.

ರವಿಕುಮಾರ್ ಸಾಧನೆಗೆ ಎಸ್ ಆರ್ ಎ ಆಡಳಿತ ಮಂಡಳಿ, ಪ್ರಾಚಾರ್ಯರು,ಶಿಕ್ಷಕವೃಂದ,ರಬಕವಿ ಬನಹಟ್ಟಿಯ ಜನತೆ ರವಿಕುಮಾರ್ ಗೆ ಅಭಿನಂದನೆ ತಿಳಿಸಿ ಶುಭ ಹಾರೈಸಿದ್ದಾರೆ.

ತಂದೆಯ ನೇಕಾರಿಕೆಗೆ ನೆರವಾಗುವದರ ಜೊತೆಗೆ ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ ಈ ಸಾಧನೆ ಮಾಡಿರುವದಕ್ಕೆ ರವಿಕುಮಾರ್ ಗೆ ರಾಜ್ಯಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Comments