UK Suddi
The news is by your side.

ಎಸ್ಸೆಸ್ಸೆಲ್ಸಿ ಪರೀಕ್ಷೆ ಬೆಳಗಾವಿ ಜಿಲ್ಲೆಗೆ ರಾಮದುರ್ಗ ಫಸ್ಟ್

ರಾಮದುರ್ಗ(ಬೆಳಗಾವಿ):ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾಗಿದ್ದು ಶೈಕ್ಷಣಿಕ ಕ್ಷೇತ್ರದಲ್ಲಿ ರಾಮದುರ್ಗ ಮತ್ತೊಮ್ಮೆ ಸಾಧನೆ ಮಾಡಿದೆ.

ರಾಜ್ಯದ ಒಟ್ಟು 204 ಶೈಕ್ಷಣಿಕ ತಾಲೂಕಿನ ಪೈಕಿ ರಾಮದುರ್ಗ ರಾಜ್ಯಕ್ಕೆ 21 ಸ್ಥಾನ ಪಡೆದಿದ್ದು, ಜಿಲ್ಲೆಗೆ ಸತತ ಎರಡನೇ ಬಾರಿಗೆ ಪ್ರಥಮ ಸ್ಥಾನ ಪಡೆದಿದೆ. ಶಿರಸಿಯ ಸಿದ್ದಾಪುರ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದರೆ ಬಳ್ಳಾರಿಯ ಹೂವಿನಹಡಗಲಿ ಕೊನೆಯ ಸ್ಥಾನ ಪಡೆದಿದೆ.

ರಾಮದುರ್ಗ ತಾಲೂಕಿನಲ್ಲಿ ಒಟ್ಟು 3347 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅದರಲ್ಲಿ 2909 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಶೇ. 86.91 ಫಲಿತಾಂಶ ಪಡೆದಿದೆ. ಕಳೆದ ಬಾರಿ ಹೋಲಿಸಿದರೆ ಈ ಬಾರಿ ಅತ್ಯುತ್ತಮ ಫಲಿತಾಂಶ ಪಡೆದುಕೊಂಡಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

-ನಮ್ಮ ರಾಮದುರ್ಗ

Comments