UK Suddi
The news is by your side.

ಕರಲಟ್ಟಿ ಬ್ರದರ್ಸ್ಗೆ ಸಿಹಿ ತಿನಿಸಿ ಶುಭ ಹಾರೈಸಿದ ಶಾಸಕ ಸಿದ್ದು ಸವದಿ.

ಬನಹಟ್ಟಿ(ಬಾಗಲಕೋಟೆ):ಜಿಲ್ಲೆಯ ಬನಹಟ್ಟಿ ನಗರದಲ್ಲಿ
ಇತ್ತೀಚೆಗೆ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಏಳನೇ ಸ್ಥಾನ ಪಡೆದ ಇಲ್ಲಿನ ಎಸ್ ಆರ್ ಎ ಪ್ರೌಢಶಾಲೆ ವಿದ್ಯಾರ್ಥಿ ರವಿಕುಮಾರ ಬಸವರಾಜ ಕರಲಟ್ಟಿ ಹಾಗೂ ಕೆಲ ದಿನಗಳ ಹಿಂದೆ ನಡೆದ ಪಿಯುಸಿ ಪರೀಕ್ಷೆಯಲ್ಲಿ ಬಾಗಲಕೋಟೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದ ಮಲ್ಲಿಕಾರ್ಜುನ ಕರಲಟ್ಟಿ ಇಬ್ಬರೂ ವಿದ್ಯಾರ್ಥಿಗಳನ್ನು ತೇರದಾಳ ಮತ ಕ್ಷೇತ್ರದ ಶಾಸಕರಾದ ಸಿದ್ದು ಸವದಿಯವರು ಸನ್ಮಾನಿಸಿ ಸಿಹಿ ಹಂಚಿ ಶುಭ ಹಾರೈಸಿದರು.

ನಿನ್ನೆ ಪ್ರಕಟವಾಗಿರುವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಬಡ ನೇಕಾರನ ಮಗನಾದ ರವಿಕುಮಾರ್ ಕರಲಟ್ಟಿ 625ಕ್ಕೆ 620 ಅಂಕಗಳನ್ನು ಪಡೆದು ರಾಜ್ಯಕ್ಕೆ ಏಳನೇ ರ್ಯಾಂಕ್ ಪಡೆದಿದ್ದು,ರಬಕವಿ ಬನಹಟ್ಟಿ ತಾಲೂಕಿಗೆ ಕೀರ್ತಿ ತಂದಿದ್ದಾನೆ.

ವಿದ್ಯಾರ್ಥಿಗಳ ಸನ್ಮಾನ ಸಂದರ್ಭದಲ್ಲಿ ಎಸ್ ಆರ್ ಎ ಆಡಳಿತ ಮಂಡಳಿ,ವಿದ್ಯಾರ್ಥಿಗಳ ಪಾಲಕರು, ಶಿಕ್ಷಣ ಪ್ರೇಮಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Comments