UK Suddi
The news is by your side.

ಕುಂದಗೋಳ ಕ್ಷೇತ್ರದ ವ್ಯಾಪ್ತಿಯಲ್ಲಿ ಮೇ 19 ರಂದು ಜಾತ್ರೆ,ಸಂತೆ ನಿಷೇಧ.

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ಮೇ.19 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಕ್ಷೇತ್ರದ ವ್ಯಾಪ್ತಿಯಲ್ಲಿ ಅಂದು ನಡೆಯಬೇಕಿದ್ದ ಜಾತ್ರೆ ಹಾಗೂ ಸಂತೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.

ಹುಬ್ಬಳ್ಳಿ ತಾಲೂಕ ಛಬ್ಬಿ ಹೋಬಳಿಯ ಅಂಚಟಗೇರಿ,ನೂಲ್ವಿ ಹಾಗೂ ಛಬ್ಬಿ ಗ್ರಾಮಗಳಲ್ಲಿ ನಡೆಯಬೇಕಿದ್ದ ಸಂತೆಗಳು ಮತ್ತು ಕುಂದಗೋಳ ಹೋಬಳಿಯ ಕಮಡೊಳ್ಳಿ ಗ್ರಾಮದ ಶ್ರೀಲೋಚನೇಶ್ವರ ಮಠದ ಜಾತ್ರೆಯನ್ನು ವಿಧಾನಸಭಾ ಉಪಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ಜರುಗಿಸುವ ಹಿತದೃಷ್ಟಿಯಿಂದ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

-Dharawad VB

Comments