UK Suddi
The news is by your side.

ಚಿಕ್ಕೋಡಿ RTO ಕಚೇರಿ ಮೇಲೆ ಎಸಿಬಿ ದಾಳಿ.

ಚಿಕ್ಕೋಡಿ: ಇಲ್ಲಿನ ಸಾರಿಗೆ ಆಯುಕ್ತರ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಸುಮಾರು 20 ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳ ತಂಡ ಆರ್ ಟಿ ಒ ಕಚೇರಿ ಮೇಲೆ ದಾಳಿ ನಡೆಸಿದೆ. ಕಚೇರಿಯಲ್ಲಿ ಏಜೆಂಟರ್ ಹಾವಳಿ ಹೆಚ್ಚಾಗಿದ್ದು, ಸೌಲಭ್ಯ ಪಡೆಯಲು ಲಂಚ ನೀಡಬೇಕಿದೆ ಎಂದು ಖಾಸಗಿ ವ್ಯಕ್ತಿಯೊಬ್ಬರು ಎಸಿಬಿಗೆ ದೂರು ನೀಡಿದ್ದರು.

ದೂರು ಹಿನ್ನಲೆ ಇಂದು ನಾಲ್ಕು ಜನ ಎಸಿಬಿ ಪಿಎಸ್ ಐ ಸೇರಿದಂತೆ 20 ಕ್ಕೂ ಹೆಚ್ಚು ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಶೆಡ್ ನಿಂದ ಕೆಲ ಏಜೆಂಟರ್ ಪರಾರಿಯಾಗಿದ್ದರೆ, ಕೆಲವರನ್ನು ಸೆರೆ ಹಿಡಿದು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಏಜೆಂಟರ್ ಬಳಿ ಲಕ್ಷಾಂತರ ಹಣ ದೊರೆತಿದೆ ಎಂಬ ಮಾಹಿತಿ ಹೊರ ಬಿದ್ದಿದೆ.

Comments