UK Suddi
The news is by your side.

ನಕ್ಸಲರಿಂದ ಭೀಕರ ಅಟ್ಟಹಾಸ: 15 ಸೇನಾ ಕಮಾಂಡೋಗಳು ಹುತಾತ್ಮ

ಗಡಚಿರೋಲಿ (ಮಹಾರಾಷ್ಟ್ರ): ಮೂವತ್ತಕ್ಕೂ ಹೆಚ್ಚು ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಿ ಆರ್ಭಟಿಸಿದ ಬೆನ್ನಲ್ಲೇ ನಕ್ಸಲರು 15ಕ್ಕೂ ಹೆಚ್ಚು ಸೇನಾ ಕಮಾಂಡೋಗಳನ್ನ ಬಲಿತೆಗೆದುಕೊಂಡಿದ್ದಾರೆ. ಗಡಚಿರೋಲಿಯಲ್ಲಿ ಸಿ-60 ಕಮಾಂಡೋಗಳ ತಂಡವೊಂದನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಮೇಲೆ ನಕ್ಸಲರು ಐಇಡಿ ಬಾಂಬ್ ಸ್ಫೋಟಿಸಿದ ಪರಿಣಾಮ 15ಕ್ಕೂ ಹೆಚ್ಚು ಕಮಾಂಡೋಗಳು ದಾರುಣ ಸಾವನ್ನಪ್ಪಿದ್ದಾರೆ.

ಟ್ರಕ್ನಲ್ಲಿ ಸಾಗುತ್ತಿದ್ದ ಸಿ-60 ಕಮಾಂಡೋ ತಂಡವು ಅತ್ಯಂತ ಕಠಿಣ ನಕ್ಸಲ್ ನಿಗ್ರಹ ತರಬೇತಿ ಪಡೆದಿತ್ತು. ನಕ್ಸಲರ ವಿರುದ್ಧ ಹೋರಾಡಲು ಬೇಕಾದ ಗೆರಿಲ್ಲಾ ಮೊದಲಾದ ಆಕ್ರಮಣ ತಂತ್ರಗಳನ್ನ ಕರಗತ ಮಾಡಿಕೊಂಡಿತ್ತು. ಕಳೆದ ವರ್ಷ ಇದೇ ತಂಡವು ಗಡಚಿರೋಲಿಯಲ್ಲೇ 40 ಮಾವೋವಾದಿ ಉಗ್ರರನ್ನು ಎನ್ಕೌಂಟರ್ ಮಾಡಿ ಹತ್ಯೆಗೈದಿತ್ತು. ಆ ಹತ್ಯೆಗೆ ನಕ್ಸಲರು ಇವತ್ತು ಕಾರ್ಮಿಕರ ದಿನದಂದು ಸೇಡು ತೀರಿಸಿಕೊಂಡಿದ್ದಾರೆ.

Comments