UK Suddi
The news is by your side.

ನ್ಯಾಯಾಲಯ ಆವರಣದಲ್ಲೆ ಲಂಚ ಸ್ವೀಕರಿಸುತ್ತಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಎಸಿಬಿ ಬಲೆಗೆ.

ತುಮಕೂರು: ನ್ಯಾಯಾಲಯ ಆವರಣದಲ್ಲಿಯೇ ಲಂಚ ಸ್ವೀಕರಿಸುತ್ತಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಎಸಿಬಿ ಬೆಲೆಗೆ ಬಿದ್ದಿದ್ದಾರೆ.

ತಿಪಟೂರು ಮುನಿಸಿಫ್ ನ್ಯಾಯಾಲಯದ ಪೂರ್ಣಿಮಾ ಜಿ. ಎಸಿಬಿ ಬಲೆಗೆ ಬಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್.

2015 ರಲ್ಲಿ ವೃದ್ದೆ ಮೇಲೆ ವಿದ್ಯುತ್ ಕಂಬ ಬಿದ್ದು ಕಾಲು ತುಂಡರಿಸಿತ್ತು. ಪಬ್ಲಿಕ್ ಪ್ರಾಸಿಕ್ಯೂಟರ್ ಈ ಪ್ರಕರಣದ ವಕಾಲತ್ತು ವಹಿಸಿದ್ದರು. ನಿನ್ನೆ ನ್ಯಾಯಾಲಯದಲ್ಲಿ ಖುಲಾಸೆಗೊಂಡಿತ್ತು. ಪ್ರಕರಣ ಸಂಬಂಧ ಮೇಲ್ಮನವಿ ಸಲ್ಲಿಸದಿರಲು 40 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

20 ಸಾವಿರ ರೂ. ಬ್ಯಾಂಕ್ ಅಕೌಂಟ್ ಗೆ ಹಾಕಿಸಿಕೊಂಡಿದ್ದು, ನ್ಯಾಯಾಲಯದ ಆವರಣದಲ್ಲಿಯೇ ಇಂಜಿನಿಯರ್ ಗುರುಬಸವಸ್ವಾಮಿ ಎಂಬುವರರಿಂದ 20 ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ.

ಬಳಿಕ ಕಚೇರಿಯಲ್ಲೇ ರಾತ್ರಿ 10.30 ರವೆರೆಗೆ ಎಸಿಬಿ ಅಧಿಕಾರಿಗಳು ಪೂರ್ಣಿಮಾ ಅವರನ್ನು ವಿಚಾರಣೆ ನಡೆಸಿದರು.

Comments