ಬೈಲಹೊಂಗಲದಲ್ಲಿ ಕಾರ್ಮಿಕ ದಿನ ಆಚರಣೆ.
ಬೈಲಹೊಂಗಲ: ಮಾಲೀಕ ಮತ್ತು ಕಾರ್ಮಿಕರ ನಡುವೆ ಉತ್ತಮ ಭಾಂದ್ಯವ್ಯ ಹೊಂದಿದಲ್ಲಿ ಮಾತ್ರ ಸಂಸ್ಥೆ ಅಭಿವೃದ್ದಿ ಕಾಣಲು ಸಾಧ್ಯವೆಂದು ನ್ಯಾಯಾಧೀಶೆ ಶ್ರೀಕಾವೇರಿ ಕಲ್ಮಠ ಹೇಳಿದರು.
ಅವರು ಬುಧವಾರ ಪಟ್ಟಣದ ಪುರಸಭೆ ಆವರಣದಲ್ಲಿ ತಾಲೂಕಾ ಕಾನೂನು ನೆರವು ಸೇವಾ ಸಮಿತಿ, ಪುರಸಭೆ ಸಂಯುಕ್ತ ಆಶ್ರಯದಲ್ಲಿ ಕಾರ್ಮಿಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಖಾಸಹಿ, ಅನುದಾನಿತ ಸಂಸ್ಥೆಯ ಮಾಲೀಕರು ತಮ್ಮ ಕಾರ್ಮಿಕರ ಹಿತ ಕಾಪಾಡಬೇಕು. ಕಾರ್ಮಿಕ ತನ್ನ ಅವಿರತ ಶ್ರಮ ವಹಿಸಿದಾಗ ಮಾತ್ರ ಮಾಲೀಕನು ಉನ್ನತ ಸ್ಥಾನಕ್ಕೆ ಏರಲು ಸಾಧ್ಯ ಎಂದರು.
ಯಾವುದೇ ಸಂಸ್ಥೆಯ ಕಾರ್ಮಿಕರು ಮಾಲಿಕನಿಂದ ತಮಗಾದ ಅನ್ಯಾಯದ ವಿರುದ್ದ ನಿರಂಕುಶವಾಗಿ ಹೋರಾಡಲು ಕಾನೂನಿನಡಿಲ್ಲಿ ಮುಕ್ತ ಅವಕಾಶವಿದೆ. ಯಾವುದೇ ಕಾರ್ಮಿಕರಿಗೆ ಅನ್ಯಾಯವಾದಾಗ ಕಾನೂನಿನ ಮೊರೆ ಹೋಗಿ ಸೂಕ್ತ ಪರಿಹಾರ ಕಂಡುಕೊಳ್ಳಬಹು ಎಂದರು.
ನ್ಯಾಯಾಧೀಶೆ ಚೈತ್ರಾ ಎ.ಎಂ, ಜಿಲ್ಲಾ ಕಾರ್ಮಿಕ ಉಪವಿಭಾಗದ ಅಧಿಕಾರಿ ಎಂ.ಎಸ್.ಜೋಗೂರ ಮಾತನಾಡಿ, ಸರ್ಕಾರ ಅಸಂಘಟಿತ ಕಾರ್ಮಿಕರ ವಲಯಕ್ಕೆ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ಅವುಗಳ ಸದುಪಯೋಗ ಮಾಡಿಕೊಳ್ಳುವಲ್ಲಿ ತಾಲೂಕಾ ಅಧಿಕಾರಿಗಳು ಅವರಿಗೆ ತಿಳುವಳಿಕೆ ನೀಡಬೇಕೆಂದರು.
ತಾಲೂಕಾ ಕಾರ್ಮಿಕ ಅಧಿಕಾರಿ ವಿರೇಶ ಮೋರಕರ, ವಕೀಲ ಎಫ್.ಎಸ್.ಸಿದ್ದನಗೌಡರ ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಮೆಳವಂಕಿ, ಉಪಾಧ್ಯಕ್ಷ ಕೆ.ಎಸ್.ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ದುಂಡೇಶ ಗರಗದ, ಸರ್ಕಾರಿ ಅಭಿಯೋಜಕ, ರಮೇಶ ಕೋಲಕಾರ, ವಕೀಲರಾದ ಸಂತೋಷ ಭಾಂವಿ, ಎಸ್.ವಾಯ್.ಪಾಟೀಲ, ಬಸವರಾಜ ದೋತ್ರದ, ವಿಶ್ವನಾಥ ಪೂಜೇರ, ಪುರಸಭೆ ಅಧಿಕಾರಿಗಳು ಇದ್ದರು. ಪುರಸಭೆ ಪರಿಸರ ಅಭಿಯಂತರ ಸತೀಶ ಕಜ್ಜಿಡೋಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಸ ವಿಲೆವಾರಿ ಕುರಿತು ಮಾಹಿತಿ ನೀಡಿದರು. ರಮೇಶ ಹಿಟ್ಟಣಗಿ ಸ್ವಾಗತಿಸಿ, ನಿರೂಪಿಸಿದರು. ಸಂಜಯ ಹಂಚಿನಮನಿ ವಂದಿಸಿದರು.