ಮೋದಿ ವಿರುದ್ಧ ಸ್ಪರ್ಧಿಸಿದ್ದ ತೇಜ್ ಬಹದ್ದೂರ್ ನಾಮಪತ್ರ ತಿರಸ್ಕೃತ.
ವಾರಾಣಸಿ (ಉ.ಪ್ರ): ಬಿ.ಎಸ್.ಎಪ್ ಮಾಜಿ ಯೋಧ ಹಾಗೂ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದ ಸಮಾಜವಾದಿ ಪಾರ್ಟಿ ಅಭ್ಯರ್ಥಿ ತೇಜ ಬಹದ್ದೂರ್ ಅವರ ನಾಮಪತ್ರ ತಿರಸ್ಕೃತವಾಗಿದೆ.
ಅಶಿಸ್ತು ಅಥವಾ ಭ್ರಷ್ಟಾಚಾರದ ಕಾರಣಕ್ಕಾಗಿ ನಿಮ್ಮನ್ನು ಸೇನಾ ಸೇವೆಯಿಂದ ತೆಗೆಯಲಾಗಿತ್ತೇ ಎಂಬ ಬಗ್ಗೆ ಪ್ರಮಾಣ ಪತ್ರ ನೀಡುವಂತೆ ಚುನಾವಣಾಧಿಕಾರಿ ಸುರೇಂದ್ರ ಸಿಂಗ್ ತೇಜ್ ಬಹದೂರಗೆ ಮಂಗಳವಾರ ನೋಟೀಸು ಜಾರಿಗೊಳಿಸಿದ್ದರು.
ಸೇವೆಯಿಂದ ಬಿಡುಗಡೆ ಗೊಂಡಿರುವ ಕಾರಣದ ಬಗ್ಗೆ ಮೇ 1 ರಂದು ಬೆಳಗ್ಗೆ 11 ಗಂಟೆಯೊಳಗೆ ಪ್ರಮಾಣ ಪತ್ರ ಸಲ್ಲಿಸಬೇಕೆಂದೂ ಬಹದೂರಗೆ ಚುನಾವಣಾಧಿಕಾರಿ ಸೂಚಿಸಿದ್ದರು.