UK Suddi
The news is by your side.

ಕುಂದಗೋಳ ಉಪಚುನಾವಣೆ ಒಂದು ನಾಮಪತ್ರ ತಿರಸ್ಕೃತ

ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಉಪಚುನಾವಣೆಯ ನಾಮಪತ್ರಗಳ ಪರಿಶೀಲನೆ ಕಾರ್ಯ ಮಂಗಳವಾರ ಜರುಗಿತು.

ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಬೈಲಹೊಂಗಲ ನಿವಾಸಿ ದಯಾನಂದ ಚಿಕ್ಕಮಠ ಅವರ ನಾಮಪತ್ರ ತಿರಸ್ಕಾರಗೊಂಡಿದೆ.ನಾಮಪತ್ರ ಅರ್ಜಿಯೊಂದಿಗೆ ಅಲ್ಲಿನ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಭಾಗದ ಪ್ರಮಾಣೀಕೃತ ಪ್ರತಿಯನ್ನು ಬೈಲಹೊಂಗಲ ಚುನಾವಣಾಧಿಕಾರಿಗಳಿಂದ ಪಡೆದು ಸಲ್ಲಿಸಿರದ ಕಾರಣ ನಾಮಪತ್ರ ತಿರಸ್ಕರಗೊಂಡಿದೆ ಎಂದು ಚುನಾವಣಾಧಿಕಾರಿ ವಿ.ಪ್ರಸನ್ನ ತಿಳಿಸಿದ್ದಾರೆ.

Comments