UK Suddi
The news is by your side.

ಕುಂದಗೋಳ ಉಪಚುನಾವಣೆ:ಮತಗಟ್ಟೆಗಳಿಗೆ ಭೇಟಿ ನೀಡಿದ ಹೆಚ್.ಅರುಣಕುಮಾರ್

ಹುಬ್ಬಳ್ಳಿ: ಕುಂದಗೋಳ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗದಿಂದ ಸಾಮಾನ್ಯ ವೀಕ್ಷಕರಾಗಿ ನೇಮಕಗೊಂಡಿರುವ ಹಿರಿಯ ಐಎಎಸ್ ಅಧಿಕಾರಿ ಹೆಚ್.ಅರುಣಕುಮಾರ್ ಅವರು ಮಂಗಳವಾರದಂದು ಕ್ಷೇತ್ರ ವ್ಯಾಪ್ತಿಯ ವರೂರು ಹಾಗೂ ಛಬ್ಬಿ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಹಿಂದೆ ನಡೆದ ವಿಧಾನಸಭಾ, ಲೋಕಸಭಾ ಚುನಾವಣೆಗಳಲ್ಲಿ ಈ ಮತಗಟ್ಟೆಗಳಲ್ಲಿ ಆಗಿರುವ ಮತದಾನ ಪ್ರಮಾಣದ ಮಾಹಿತಿ, ಮತ್ತಿತರ ವಿವರಗಳನ್ನು ಸ್ಥಳೀಯರಿಂದ ಪಡೆದರು‌. ವೀಕ್ಷಕರ ಸಮನ್ವಯಾಧಿಕಾರಿ ಮೋಹನ ಭರಮಕ್ಕನವರ್ ಮತ್ತಿತರರ ಸಿಬ್ಬಂದಿ ಉಪಸ್ಥಿತರಿದ್ದರು.

-Dharawad VB

Comments