UK Suddi
The news is by your side.

ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ:ಮೂವರು ಪೊಲೀಸ್ ಪೇದೆಗಳ ಅಮಾನತ್ತು.

ಧಾರವಾಡ: ಏಪ್ರಿಲ್ 28 ರಂದು ನವಲಗುಂದ ಪಟ್ಟಣದ ಕರ್ನಾಟಕ ಬ್ಯಾಂಕ್ ಎಟಿಎಂ ಸೆಕ್ಯೂರಿಟಿ ಗಾರ್ಡ್ ಆನಂದ ನಾಗಪ್ಪ ನರಗುಂದ ಅವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ನವಲಗುಂದ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಯನ್ನು ಅಮಾನತ್ತುಗೊಳಿಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತ ಆದೇಶ ಹೊರಡಿಸಿದ್ದಾರೆ.

ಪೊಲೀಸ್ ಉಪ ಅಧೀಕ್ಷಕರು ನೀಡಿದ ವಿಚಾರಣಾ ವರದಿ ಆಧರಿಸಿ ಸಿಬ್ಬಂದಿಗಳಾದ ಸದ್ದಾಂ ಹುಸೇನ್‌ ಜಿ ತಲ್ಲೂರ, ಮಲ್ಲಾರೆಡ್ಡಿ ಬಿ.ನಿಂಗಾವರೆ ಹಾಗೂ ನಿಂಗರಡ್ಡಿ ದೇವರಡ್ಡಿ ಹೆಬ್ಬಾಳ ಅವರನ್ನು ಅಮಾನತ್ತುಗೊಳಿಸಲಾಗಿದೆ.

ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ಉಂಟು ಮಾಡುವಂತೆ ವರ್ತಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ , ವಿಚಾರಣೆ ಬಾಕಿ ಇರಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Comments